ಸಿರಾಜ್-ಲಿಟ್ಟನ್ ದಾಸ್ ನಡುವೆ ವಾಗ್ವಾದ: ದಾಸ್ ಬೌಲ್ಡ್ ಆಗುತ್ತಿದ್ದಂತೆ ತಿರುಗೇಟು ಕೊಟ್ಟ ವಿರಾಟ್, ವಿಡಿಯೋ ವೈರಲ್!

ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಮೊಹಮ್ಮದ್ ಸಿರಾಜ್ ಮತ್ತು ಲಿಟನ್ ದಾಸ್ ನಡುವೆ ವಾಗ್ವಾದ ನಡೆದಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಸಿರಾಜ್-ಲಿಟನ್ ದಾಸ್ ನಡುವೆ ವಾಗ್ವಾದ
ಸಿರಾಜ್-ಲಿಟನ್ ದಾಸ್ ನಡುವೆ ವಾಗ್ವಾದ
Updated on

ಚಿತ್ತಗಾಂಗ್: ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಮೊಹಮ್ಮದ್ ಸಿರಾಜ್ ಮತ್ತು ಲಿಟನ್ ದಾಸ್ ನಡುವೆ ವಾಗ್ವಾದ ನಡೆದಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. 

ಬೌಲಿಂಗ್ ವೇಳೆ ಸಿರಾಜ್ ಲಿಟನ್ ದಾಸ್‌ರನ್ನು ಕಿಚಾಯಿಸಿದರು. ಇದಕ್ಕೆ ಲಿಟ್ಟನ್ ದಾಸ್ ಕಿವಿಗೆ ಕೈಯಿಟ್ಟು ಸನ್ನೆ ಮಾಡಿ 'ನಿನ್ನ ಮಾತು ಕೇಳಲು ಸಾಧ್ಯವಿಲ್ಲ' ಎಂಬಂತೆ ಉತ್ತರಿಸಿದರು. ಆದರೆ ಮುಂದಿನ ಎಸೆತದಲ್ಲೇ ಲಿಟ್ಟನ್ ದಾಸ್ ಕ್ಲೀನ್ ಬೌಲ್ಡ್ ಆದರು. ಈ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿದ್ದರು.

ಭಾರತ ತಂಡದ ಮಾಜಿ ನಾಯಕ ವಿರಾಟ್ ವಿಕೆಟ್ ಸಹ ಪ್ರೇಕ್ಷಕರನ್ನು ನೋಡುತ್ತಾ ಕಿವಿಗೆ ಕೈಯಿಟ್ಟು ಸನ್ನೆ ಮಾಡಿ ಗೇಲಿ ಮಾಡಿದರು. ನಂತರ ಸಿರಾಜ್ ಅವರ ಪ್ರತಿಕ್ರಿಯೆಯೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಲಿಟ್ಟನ್ ದಾಸ್ 30 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಬಾಂಗ್ಲಾದೇಶದ ಅಗ್ರ ಕ್ರಮಾಂಕವನ್ನು ನಾಶಪಡಿಸಿದ್ದರು. 

ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಸಿರಾಜ್ ಬೌಲಿಂಗ್ ನಲ್ಲಿ ಎಡಗೈ ಬ್ಯಾಟ್ಸ್‌ಮನ್ ನಜ್ಮುಲ್ ಹುಸೇನ್ ಶಾಂಟೊ ರಿಷಬ್ ಪಂತ್ ಗೆ ಕ್ಯಾಚ್ ನೀಡಿದರು. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದರು. ಉಮೇಶ್ ಯಾದವ್ ಯಾಸಿರ್ ಅಲಿಯನ್ನು ಔಟ್ ಮಾಡಿದರು. ಹೀಗಾಗಿ ಬಾಂಗ್ಲಾದೇಶದ ಸ್ಕೋರ್ ಐದು ರನ್‌ಗಳಿಗೆ ಎರಡು ವಿಕೆಟ್ ಪತನಗೊಂಡಿತ್ತು.

404 ರನ್ ಬಾರಿಸಿದ ಭಾರತ
ಇದಕ್ಕೂ ಮುನ್ನ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಲದಿಂದ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್ ಗಳಿಸಿತ್ತು. ಮೊದಲ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತ್ತು. ಇಂದು ಎರಡನೇ ದಿನದಾಟವನ್ನು ಆರಂಭಿಸಿದ ಶ್ರೇಯಸ್ ಅಯ್ಯರ್(86) ರನ್ ಗೆ ಔಟಾದರು. ಅಯ್ಯರ್ ನಿರ್ಗಮನದ ನಂತರ ಕುಲದೀಪ್ ಯಾದವ್ (114 ಎಸೆತಗಳಲ್ಲಿ 40) ಮತ್ತು ರವಿಚಂದ್ರನ್ ಅಶ್ವಿನ್ (113 ಎಸೆತಗಳಲ್ಲಿ 58) ಏಳನೇ ವಿಕೆಟ್ ಜೊತೆಯಾಟದಲ್ಲಿ 200 ಎಸೆತಗಳಲ್ಲಿ 87 ರನ್ ಪೇರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com