Kannadaprabha Friday, December 26, 2014 7:08 PM IST
The New Indian Express

ಶಾರುಖ್‌ಗೆ ನಿಷೇಧ ಮುಂದುವರಿಕೆ

ಮುಂಬೈ: ಕಳೆದ ಐಪಿಎಲ್‌ನಲ್ಲಿ ವಾಂಖೆಡೆ ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಿದ್ದ ಕಾರಣ ಬಾಲಿವುಡ್ ತಾರೆ ಶಾರುಖ್ ಖಾನ್‌ರನ್ನು 5 ವರ್ಷಗಳ ಕಾಲ ನಿಷೇಧ ಹೇರಿದ್ದು, ಈ ಬಾರಿಯ ಐಪಿಲ್ ವೇಳೆಯೂ ತಮ್ಮ ನಿರ್ಧಾರವನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮುಂದುರಿಸಲು ನಿರ್ಧರಿಸಿದೆ.

ಈ ಕುರಿತು ತಮ್ಮ ನಿಧಾರವನ್ನು ಸ್ಪಷ್ಟಪಡಿಸಿರುವ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರವಿ ಸಾವಂತ್, ಶಾರುಖ್ ವಿರುದ್ಧ ಕಳೆದ ವರ್ಷ ತೆಗೆದುಕೊಳ್ಳಲಾಗಿರುವ ನಮ್ಮ ನಿರ್ಧಾರವನ್ನು ನಾವು ಮುಂದುವರಿಸಲಿದ್ದು, ಈ ಆವೃತ್ತಿಯಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಅವರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷ ಶಾರುಖ್ ಖಾನ್ ಅವರ ವರ್ತನೆಯಿಂದಾಗಿ ಮುಂಬೈ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪಕ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ವರ್ಷವೂ ಅದನ್ನು ಮುಂದುವರಿಸಲಿದ್ದು ನಮ್ಮ ನಿರ್ಧಾರವನ್ನು ಸಡಿಲಿಸುವುದಿಲ್ಲ ಎಂದು ಅವರು ಹೇಳಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ಐಪಿಎಲ್ ಪಂದ್ಯದ ವೇಳೆ ಫ್ರಾಂಚೈಸಿ ಹಾಗೂ ತಂಡದ ಮಾಲೀಕರೂ ಆದ ಶಾರುಖ್, ವಾಂಖೆಡೆ ಕ್ರೀಡಾಂಗಣದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಿ ಅವರ ಮೇಲೆ ಅಲ್ಲೆ ನಡೆಸಲು ಪ್ರಯತ್ನಿಸಿದ್ದರು. ಈ ಘಟನೆಯ ನಂತರ ತಮ್ಮ ಅಸಭ್ಯ ವರ್ತನೆಗೆ ಕ್ಷಮೆ ಕೋರಲು ಶಾರುಖ್ ನಿರಾಕರಿಸಿದ್ದರು ಈ ಹಿನ್ನಲೆಯಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ಶಾರುಖ್ ಅವರನ್ನು 5 ವರ್ಷಗಳ ಕಾಲ ವಾಂಖೆಡೆ ಕ್ರೀಡಾಂಗಣದ ಆವರಣಕ್ಕೆ ಪ್ರವೇಶಿಸದಂತೆ ನಿಷೇಧ ಏರಿತ್ತು.

ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಶನಿವಾರ ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿ, ಶಾರುಖ್ ಖಾನ್‌ರ ಮೇಲೆ ಹೇರಲಾಗಿರುವ 5 ವರ್ಷಗಳ ನಿಷೇಧವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಇದರ ಜತೆಗೆ ಕಳೆದ ಎರಡು ತಿಂಗಳ ಹಿಂದೆ ಮುಂಬೈ ಕ್ರಿಕೆಟ್ ಸಂಸ್ಥೆಯು ಐಪಿಎಲ್‌ಗೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ಹಾಗೂ ಬಿಸಿಸಿಐ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದಲ್ಲಿ ಐಪಿಎಲ್ ಪಂದ್ಯದ ವೇಳೆ ವಾಂಖೆಡೆ ಕ್ರೀಡಾಂಗಣದ ಆವರಣಕ್ಕೆ ಕೇವಲ ಅಂಗೀಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು ಹಾಗೂ ನಿಷೇಧಿತ ವ್ಯಕ್ತಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ತಿಳಿಸಿದೆ.

ಈ ವೇಳೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, ಶಾರುಖ್ ಅವರು ಐಪಿಎಲ್‌ನ ತಂಡವೊಂದರ ಮಾಲೀಕರಾದ ಹಿನ್ನಲೆಯಲ್ಲಿ ಅವರಿಗೆ ಪ್ರವೇಶ ನೀಡಬೇಕು ಎಂದು ಈ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದರಾದರೂ, ಈ ವಿಷಯದ ಬಗ್ಗೆ ನಾವು ಮತ್ತೆ ಮತ್ತೆ ಚರ್ಚಿಸಲು ಇಚ್ಛಿಸುವುದಿಲ್ಲ, ನಾವು ನಮ್ಮ ನಿರ್ಧಾರಕ್ಕೆ ಬದ್ಧರಾದಗಿದ್ದೇವೆ ಎಂದು ಸಾವಂತ್ ಸ್ಪಷ್ಟಪಡಿಸಿದ್ದಾರೆ.

ಮೇ 7 ರಂದು ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ವಿಷಯದ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ.

ಕನ್ನಡ ಮ್ಯಾಟ್ರಿಮೋನಿ - ಉಚಿತ ನೋಂದಣಿ !

Topics : Sports, Cricket, Football, Tennis, ಕ್ರೀಡೆ, ಕ್ರಿಕೆಟ್, ಪುಟ್ ಬಾಲ್, ಟೆನ್ನಿಸ್
ಇದನ್ನೂ ಓದಿ...
ಈ ವಿಭಾಗದ ಇತರ ಸುದ್ದಿ
ಫೋಟೊ ಗ್ಯಾಲರಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಪರೂಪದ ಚಿತ್ರಗಳು

ಸನ್ನಿಯೊಂದಿಗೆ 'ಮಸ್ತಿಜಾದೆ'

ಕಿಂಗ್‌ಫಿಶರ್ ಕ್ಯಾಲೆಂಡರ್ 2015: ಸೂಪರ್ ಮಾಡೆಲ್ಸ್

'ಮೇಘ ಬಂತು ಮೇಘ'
ವಿಡಿಯೋ
SURAT SI CAUGHT DANCING WITH BAR GIRL DURING DUTY HOURS

ಬಾರ್ ಡ್ಯಾನ್ಸರ್ ಜತೆ ಕುಣಿದ ಸಬ್‌ಇನ್ಸ್‌ಪೆಕ್ಟರ್!
Delhi acid attack caught on tape

ದೆಹಲಿಯಲ್ಲಿ ವೈದ್ಯೆ ಮೇಲೆ ಆ್ಯಸಿಡ್ ದಾಳಿ
TUBELIGHT Kannada movie trailer

'ಟ್ಯೂಬ್ ಲೈಟ್' ಚಿತ್ರದ ಟ್ರೈಲರ್
4 Teas that you should drink

ತೂಕ ಇಳಿಕೆಗೆ ಕುಡಿಯಲೇ ಬೇಕಾದ ಚಹಾಗಳು

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

comments powered by Disqus

Disclaimer: The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. Comments are automatically posted live; however, kannadaprabha.com reserves the right to take any or all comments down at any time.

Kannadaprabha.com App for Android